ಫೆಬ್ರವರಿ ೧೮ - ಫೆಬ್ರವರಿ ತಿಂಗಳಿನ ೧೮ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೪೯ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೧೬ (ಅಧಿಕ ವರ್ಷದಲ್ಲಿ ೩೧೭) ದಿನಗಳು ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ವರ್ಷ ೨೦೦೭ - ಸಂಜೋತಾ ಎಕ್ಸ್ಪ್ರೆಸ್ ಮೇಲೆ ಪಾಣಿಪತ್ ನಲ್ಲಿ ಭಯೋತ್ಪಾದನಾ ಬಾಂಬ್ ಸ್ಫೋಟ. ವರ್ಷ ೧೯೧೧ - ಗಾಳಿಯಂಚೆ ಜೊತೆಗೆ, ಅಲಹಾಬಾದ್ ನಿಂದ ಮೊದಲ ಅಧಿಕೃತ ವಿಮಾನ ನಡೆಯಿತು. == ಜನನ == ವರ್ಷ ೧೪೮೬ - ಚೈತನ್ಯ ಮಹಾಪ್ರಭುಗಳು , ಭಾರತೀಯ ಸನ್ಯಾಸಿ ಮತ್ತು ಸಂತ (ಮರಣ. ೧೫೩೪) ವರ್ಷ ೧೮೩೬ - ಭಾರತದ ಪ್ರಮುಖ ಆಧ್ಯಾತ್ಮ ಗುರು ರಾಮಕೃಷ್ಣ ಪರಮಹಂಸ ವರ್ಷ ೧೯೯೪ - ಯುಲ್ರಿಕ್ ಮಂಟರ್, ಸ್ವೀಡಿಶ್ ಗಾಯಕ ಮತ್ತು ಗೀತರಚನೆಗಾರ. ವರ್ಷ ೧೯೯೫ - ಸಮಂತಾ ಕ್ರಾಫರ್ಡ್, ಅಮೆರಿಕನ್ ಟೆನಿಸ್ ಆಟಗಾರ. == ನಿಧನ == ವರ್ಷ ೨೦೧೪ - ನಿಖಿಲ್ ಬರನ್ ಸೇನ್, ಭಾರತೀಯ ಕಲಾ ನಿರ್ದೇಶಕ ಮತ್ತು ನಿರ್ಮಾಣ ವಿನ್ಯಾಸಕ. ( ಬಿ. ೧೯೪೩) ವರ್ಷ ೨೦೧೫ - ಡಿ.ರಾಮಾನಾಯ್ದು, ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ, ಸುರೇಶ್ ಪ್ರೊಡಕ್ಷನ್ಸ್ ಸ್ಥಾಪಕ ( ಬಿ. ೧೯೩೬) ವರ್ಷ ೨೦೧೬ - ಅಬ್ದುಲ್ ರಶೀದ್ ಖಾನ್, ಭಾರತೀಯ ಗಾಯಕ ಮತ್ತು ಗೀತರಚನೆಗಾರ ( ಬಿ. ೧೯೦೮) == ಹಬ್ಬಗಳು/ಆಚರಣೆಗಳು == ಸ್ವಾತಂತ್ರ್ಯ ದಿನ (ಗ್ಯಾಂಬಿಯಾ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ